RVK – Hulimangala Observes Teachers’ Day



















Bengaluru, Sep. 5: Teachers’ Day was celebrated at Rashtrotthana Vidya Kendra – Hulimangala.
- Prof. Sridhar Melukote K., Vice President of Karnataka Sanskrit Sangha and Sanskrit Shodha Sansthan, Sirsi, and Sri Maheshwaraiah (State Administrative Officer, RVK CBSE Schools) were the Chief Guests.
- The teachers and non-teaching staff were felicitated and thanked for their dedication.
- The Chief Guest, who inaugurated the programme, in his insightful speech on the topic “Role of Teachers in Shaping Society”, highlighted the important responsibilities of teachers and their lasting impact on students and society.
- A collection of articles by teachers presented in Kannada, English and Hindi was released.
- The teachers presented lively dance performances and an attractive mini-drama.
ಬೆಂಗಳೂರು, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹುಲಿಮಂಗಲದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
- ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಶೋಧ ಸಂಸ್ಥಾನದ ಉಪಾಧ್ಯಕ್ಷರಾದ ಸಿರ್ಸಿಯ ಪ್ರೊ. ಶ್ರೀಧರ್ ಮೇಲುಕೋಟೆ ಕೆ., ಶ್ರೀ. ಮಹೇಶ್ವರಯ್ಯ (ರಾಜ್ಯ ಆಡಳಿತ ಪ್ರಮುಖ್, ಆರ್ವಿಕೆ ಸಿಬಿಎಸ್ಇ ಶಾಲೆಗಳು) ಅವರು ಆಗಮಿಸಿದ್ದರು.
- ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯನ್ನು ಅವರ ಸಮರ್ಪಣೆಗೆ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಲಾಯಿತು.
- ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳು “ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ” ಎಂಬ ವಿಷಯದ ಕುರಿತು ತಮ್ಮ ಒಳನೋಟವುಳ್ಳ ಭಾಷಣದಲ್ಲಿ ಅವರು ಶಿಕ್ಷಕರ ಮಹತ್ವದ ಜವಾಬ್ದಾರಿಗಳನ್ನು ಮತ್ತು ವಿದ್ಯಾರ್ಥಿಗಳು ಮತ್ತು ಸಮಾಜದ ಮೇಲೆ ಅವರ ಶಾಶ್ವತ ಪ್ರಭಾವವನ್ನು ಎತ್ತಿ ತೋರಿಸಿದರು.
- ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಸ್ತುತಪಡಿಸಲಾದ ಶಿಕ್ಷಕರ ಲೇಖನ ಸಂಗ್ರಹವನ್ನು ಲೋಕಾರ್ಪಣೆ ಮಾಡಲಾಯಿತು.
- ಶಿಕ್ಷಕರು ಉತ್ಸಾಹಭರಿತ ನೃತ್ಯ ಪ್ರದರ್ಶನಗಳು ಮತ್ತು ಆಕರ್ಷಕವಾದ ಕಿರುನಾಟಕವನ್ನು ಪ್ರದರ್ಶಿಸಿದರು.